ಗಜಾನನ ನಾರಾಯಣ ಜಾಧವ್

ಗಜಾನನ ನಾರಾಯಣ ಜಾಧವ್ ಒಬ್ಬ ಪ್ರಸಿದ್ಧ ಚಿತ್ರಕಾರರಾಗಿದ್ದರು. ಅವರು ಚಿತ್ರಗಳಲ್ಲಿ ನೈಜತೆಯನ್ನು ತೋರಿಸುತ್ತಿದ್ದರು. ಅವರು ಆಧುನಿಕ ಕಲೆಯನ್ನೂ ಗಮನಿಸುತ್ತಿದ್ದರು.

ಚಿತ್ರಕಾರ ಗಜಾನನ ನಾರಾಯಣ ಜಾಧವ್ ಅಲಿಯಾಸ್ ಗ. ನಾ. ಜಾಧವ್ ಅವರು 1917 ರ ನವೆಂಬರ್ 14 ರಂದು ಕೊಲ್ಲಾಪುರದಲ್ಲಿ ಜನಿಸಿದರು. ಅವರು ತನ್ನ ಮ್ಯಾಗಜೀನ್ ಕವರ್‌ಗಳು, ವಿವಿಧ ಲೇಖನಗಳು, ಕಥೆಗಳ ರೇಖಾಚಿತ್ರಗಳು, ಭಾವಚಿತ್ರಗಳು ಮತ್ತು ನಿಸರ್ಗ ಚಿತ್ರಗಳಿಂದ ಹೆಸರುಗಳಿಸಿದ್ದರು. ಅವರ ಕರ್ಮಭೂಮಿ ಮುಂಬೈ-ಪುಣೆಯಾಗಿತ್ತು. ಅವರ ತಾಯಿಯ ಹೆಸರು ತಾನಾಬಾಯಿ. ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದರು. ಹದಿನೆಂಟನೇ ವಯಸ್ಸಿನಲ್ಲಿ ಅವರು ಚಿತ್ರಕಲೆಯ ಗ್ರೇಡ್ ಪರೀಕ್ಷೆಗಳಲ್ಲಿ ಉನ್ನತ  ಉನ್ನತ ಅಂಕಗಳನ್ನು ಗಳಿಸಿ ಯಶಸ್ಸನ್ನು ಸಾಧಿಸಿದರು. ಇಲ್ಲಿಂದ ಅವರ ಚಿತ್ರಕಲಾ ಪಯಣ ಆರಂಭವಾಯಿತು. ಮನೆಯಲ್ಲಿಯೇ ಗಣಪತರಾವ್ ವಡಂಗೇಕರ್ ಮತ್ತು ಬಾಬುರಾವ್ ಪೇಂಟರ್ ಅವರಿಂದ ಚಿತ್ರಕಲೆಯ ಪಾಠವನ್ನು ಕಲಿಯತೊಡಗಿದರು. ನಂತರ ಬಾಬಾ ಗಜಬರ್, ಮಾಧವರಾವ್ ಬಾಗಲ್, ಚಿತ್ರಕಲಾವಿದ ಜಾಂಭಾಲಿಕರ್, ಈ ಗುರುಗಳಿಂದ ಮಾರ್ಗದರ್ಶನ ಪಡೆದರು. ಅವರು 1942 ರಲ್ಲಿ ಇಂದಿರಾ ಕದಮ್ ಅವರನ್ನು ವಿವಾಹವಾದರು. 

ರೇಖಾಚಿತ್ರದ ಮೇಲಿನ ಅವರ ಪಾಂಡಿತ್ಯವನ್ನು ಕಂಡ ಮಾಧವರಾವ್ ಬಾಗಲ್ ಅವರು ಜಾಧವ್ ಅವರನ್ನು ಶಂಕರರಾವ್ ಕಿರ್ಲೋಸ್ಕರ್ ಅವರ ಬಳಿಗೆ ಕಳುಹಿಸಿದರು. ಚಿತ್ರಕಲೆಯಲ್ಲಿನ ಜ್ಞಾನ, ಕೌಶಲ್ಯ ಮತ್ತು ಶ್ರಮವನ್ನು ಕಂಡ ಶಂಕರರಾವ್ ಅವರು ಜಾಧವ್ ಅವರನ್ನು ಕಿರ್ಲೋಸ್ಕರ್ ಕಂಪನಿಯಲ್ಲಿ ನೇಮಿಸಿಕೊಂಡರು. ಮಾಧವರಾವ್ ಬಾಗಲ್ ಅವರು ಜಾಧವ್ ಅವರಿಗೆ ಅವಕಾಶ ನೀಡುವಂತೆ ಶಿಫಾರಸು ಪತ್ರ ನೀಡಿದ್ದರು. ಜಾಧವ್ ಜೀವನಕ್ಕೆ ಇಲ್ಲಿ ಒಂದು ಸ್ಪಷ್ಟ ಗುರಿ ಸಿಕ್ಕಂತಾಯಿತು. ಇಲ್ಲಿ ಅವರು ಕಿರ್ಲೋಸ್ಕರ್ ಕಂಪನಿಯು 'ಕಿರ್ಲೋಸ್ಕರ್', 'ಸ್ತ್ರೀ' ಮತ್ತು 'ಮನೋಹರ್' ನಿಯತಕಾಲಿಕಗಳಿಗೆ ಮುಖಪುಟ ಮತ್ತು ಒಳಭಾಗದ ಲೇಖನಗಳಿಗೆ ಪೂರಕ ಚಿತ್ರವನ್ನು ಬಿಡಿಸುವ ಜವಾಬ್ದಾರಿಯನ್ನು ಹೊಂದಿದ್ದರು.

ಸೌಜನ್ಯ: 

https://map.sahapedia.org/search/article/

Comments