Posts

ಜಯ ಸಾಲ್ಯಾನ್ - ಕವನಗಳು

ದೇವ ನನ್ನಲ್ಲಿ…!! ನಾನು ದೇವನನ್ನು ಹುಡುಕಲು ಬಯಸಿದ್ದೆ ಅವನು ಹೇಗಿರಬಹುದೆಂದು ಊಹಿಸಿದ್ದೆ ಅವನು ನಿರ್ಗುಣ, ನಿರಾಕಾರನೆಂದು ಹಲವು ಬಾರಿ ಕೇಳಿದ್ದೆ ಆದರೆ ಪ್ರತ್ಯೇಕ ಬೀದಿ ಬದಿಯಲ್ಲಿ ಅವನ  ಅಂಗಡಿ ಮಾಡಲಾಗಿದೆ  ಅನೇಕ ಬಾರಿ  ಅವನನ್ನು ಬಂಧಿಸಿ ಇಡಲಾದ ಆ ಅಂಗಡಿಗೆ ನಾನು  ಹೋಗಿದ್ದೆ  ಅವನ ದರ್ಶನ ಪಡೆಯಲು ದೇಣಿಗೆ ಪೆಟ್ಟಿಗೆಯನ್ನು ಇಡಲಾಗಿದೆ  ನಾನು ಆ ದತ್ತಿಯಲ್ಲಿ ಸ್ವಲ್ಪ ಮೊತ್ತವನ್ನು ಕೆಲವೊಮ್ಮೆ ಹಾಕಿದೆ ಆದರೂ ಅವನನ್ನು ಭೇಟಿಯಾಗುವ ಅವಕಾಶವನ್ನು ಕಳೆದುಕೊಂಡೆ  ಪ್ರತಿ ಬಾರಿಯೂ ಭೇಟಿಯಾಗುವ ಬಯಕೆ ಬಯಕೆಯಾಗಿಯೇ ಉಳಿಯುತ್ತಿದೆ ಮರುದಿನ ಹೊಸ ಹುರುಪಿನೊಂದಿಗೆ ನಾನು ಇನ್ನೊಂದು ಅಂಗಡಿಯನ್ನು ತಲುಪುತ್ತಿದ್ದೆ  ಹೀಗೆ ಸುತ್ತಾಡುತ್ತಿರುವಾಗ ಒಂದು ದಿನ ರಸ್ತೆಯಲ್ಲಿ ಒಬ್ಬನಿಗೆ ಅಪಘಾತ ಸಂಭವಿಸಿದೆ ನಾನು ಓಡಿ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆ ಆದ್ದರಿಂದ ಬಹುಶಃ ಆತನ ಜೀವ ಉಳಿಯಿತು ಪ್ರಜ್ಞೆ ಮರಳಿದ ನಂತರ, ಆತ  ನನ್ನತ್ತ ನೋಡಿ ಮಾತನಾಡಿದ 'ಸರ್, ಮನರ್ವೀಯತೆ ಕಳೆದುಹೋದ ಈ ಜಗತ್ತಿನಲ್ಲಿ ನಿಮ್ಮಲ್ಲಿಯೇ  ದೇವರನ್ನು ಕಂಡೆ' ದೇವ ನನ್ನಲ್ಲಿ ….. !! ನನ್ನ ಒಳಗಣ್ಣು ತೆರೆಯಿತು ಹೊಕ್ಕುಳು ಕಸ್ತೂರಿ ಪರಿಮಳಹೊಂದಿದ ಹುಚ್ಚು ಜಿಂಕೆಯಂತೆ ನಾನು ನಮ್ಮೆಲ್ಲರಲ್ಲಿರುವ ಈ ತತ್ವವನ್ನು ಬೀದಿ ಬದಿಯಲ್ಲಿ ಹುಡುಕುತ್ತಿದ್ದೆ ನನ್ನ ಹುಡುಕಾಟ ಮುಗಿಯಿತು ನಾನು ಆ ದೇವನನ್ನು ಭೇಟಿಯಾದೆ - ಜಯ...

ಶ್ರೀ ಕೃಷ್ಣನ ಚಿತ್ರಗಳು

Image
ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ! ಕೃಷ್ಣ, ಈ ಹೆಸರೇ ಮೋಡಿ ಮಾಡುವಂಥದ್ದು. ಕೋಟಿಗಟ್ಟಲೆ ಭಾರತೀಯರ ಇಷ್ಟ ದೇವತೆ, ರಾಧೆಯ ಪ್ರೇಮಿ, ಗೊಲ್ಲರ ಸ್ನೇಹಿತ, ಭಾರತೀಯರ ಹೃದಯದಲ್ಲಿ ಕೃಷ್ಣನಿಗೆ ಮಹತ್ವದ ಸ್ಥಾನವಿದೆ. ಈ ಜನಪ್ರಿಯ ದೇವತೆಯನ್ನು ಅನೇಕ ಕಲಾವಿದರು ತಮ್ಮ ಕಲಾ ಕುಂಚದಿಂದ ಸುಂದರವಾಗಿ ಚಿತ್ರಿಸಿದ್ದಾರೆ.ಈ ಎಲ್ಲಾ ವರ್ಣಚಿತ್ರಗಳು 17 ರಿಂದ 18ನೇ ಶತಮಾನಕ್ಕೆ ಸೇರಿವೆ. ಈ ಅವಧಿಯಲ್ಲಿ ಹೆಚ್ಚಿನ ಕಲೆ ರಾಜಾಶ್ರಯದ ನೆರವಿನಿಂದಲೇ ಅಭಿವೃದ್ಧಿ ಹೊಂದಿದವು. ಮೊಘಲ್, ಕಾಂಗ್ರಾ ಶೈಲಿಯಲ್ಲಿ ಕಾಣುವ ಈ ವರ್ಣಚಿತ್ರಗಳು ಗಾತ್ರದಲ್ಲಿ ಚಿಕ್ಕದಾದ, ಪರಿಪೂರ್ಣವಿವರಣೆ ಕೊಡುವ ಮತ್ತು ಸೌಂದರ್ಯದ ಉತ್ತಮ ಉದಾಹರಣೆಯಾಗಿದೆ. ಈ ಕಲಾ ಸಂಗ್ರಹವು ಅತ್ಯುತ್ತಮವಾಗಿದ್ದು ದುರದೃಷ್ಟವಶಾತ್ ಇದು ವಿದೇಶಿ ವಸ್ತುಸಂಗ್ರಹಾಲಯಗಳ ವಶದಲ್ಲಿದೆ. ಆದ್ದರಿಂದ, ನಾವು ಈ ಕಲಾಕೃತಿಗಳನ್ನು ಕೇವಲ ಫೋಟೋದಲ್ಲಿ ಮಾತ್ರ ನೋಡಬಹುದು. ಶ್ರೀಮಂತ ಭಾರತೀಯ ಕಲಾ ಸಂಪ್ರದಾಯದಲ್ಲಿ ಚಿತ್ರಿಸಲಾಗಿರುವ ಈ ಕೃಷ್ಣ ವರ್ಣಚಿತ್ರಗಳು ನಿಮಗಾಗಿ... ಉದ್ಯಾನದಲ್ಲಿ ರಾಧಾಕೃಷ್ಣ (1830) ಈ ಚಿತ್ರದಲ್ಲಿ ರಾಧಾಕೃಷ್ಣ ಉದ್ಯಾನದಲ್ಲಿ ನಿರಾಳವಾಗಿ ಕುಳಿತಿದ್ದಾರೆ. ಇಬ್ಬರಲ್ಲಿಯೂ ಮಧುರ ಸಂಭಾಷಣೆ ನಡೆಯುತ್ತಿದೆ. ಸೇವಕಿಯರು ಇಂಪಾದ ಲಲಿತವಾದ ಸಂಗೀತವನ್ನು ನುಡಿಸುತ್ತಿದ್ದಾರೆ. ಸೇವಕಿಯರು ಸೇವೆ ಮಾಡಲು ಸಿದ್ಧರಾಗಿದ್ದಾರೆ. ತುಂಬಾ ಸುಂದರ ಮತ್ತು ಸೂಕ್ಷ್ಮ ವಿವರಗಳೊಂದಿಗೆ ಚಿತ್ರಿಸಿದ ಉದ್ಯಾನವು ಹೃದಯಸ್ಪರ್ಶಿ...

ಅಶೋಕ ಸ್ತಂಭದ ಉಗ್ರರೂಪ

Image
ಅಶೋಕ ಸ್ಥoಬದ ಉಗ್ರರೂಪ - ಜಯ ಸಾಲ್ಯಾನ್ ಹೊಸ ಸಂಸತ್ ಭವನದ ಮೇಲೆ ಸ್ಥಾಪಿಸಲು ಸಿದ್ಧಪಡಿಸಲಾದ ರಾಷ್ಟ್ರೀಯ ಬೋಧಚಿಹ್ನೆಯನ್ನು ಸೋಮವಾರ (೧೧/೭/ ೨೦೨೨) ನವದೆಹಲಿಯಲ್ಲಿ ಅನಾವರಣಗೊಳಿಸಲಾಯಿತು. ಸಮಾರಂಭದ ಚಿತ್ರಗಳು ಮತ್ತು ಸುದ್ದಿಗಳು ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಎಂದಿನಂತೆ ಮೊದಲು ಸಾಮಾಜಿಕ ಜಾಲತಾಣಗಳಲ್ಲಿ, ನಂತರ ವಿವಿಧ ವಾಹಿನಿಗಳಲ್ಲಿ ಗಲಾಟೆ ಎದ್ದಿತ್ತು. ಸಂಸತ್ ಭವನದಲ್ಲಿ ಮೂಲ ಅಶೋಕಸ್ತಂಭ ಮತ್ತು ಹೊಸ ಅಶೋಕಸ್ತಂಭವನ್ನು ಹೋಲಿಸುವ ಛಾಯಾಚಿತ್ರಗಳು ಟ್ವಿಟರ್‌ನಲ್ಲಿ ಹರಿದಾಡಲಾರಂಭಿಸಿದವು. ಮತ್ತು ವಾಟ್ಸಾಪ್ ಗ್ರೂಪ್‌ನಲ್ಲಿ ಮಾತಿಗೆ ಮಾತು, ಬಿಸಿಬಿಸಿ ಚರ್ಚೆಗಳು ನಡೆಯತೊಡಗಿದವು. ವಾಟ್ಸಾಪ್ ಗ್ರೂಪ್ ಗಳಲ್ಲಿ ಯಾವಾಗ್ಲೂ ಆಗೋ ಹಾಗೆ ಇಲ್ಲಿಯೂ ಆಯಿತು. ಕ್ರಮೇಣ, ಎರಡು ಗುಂಪುಗಳಾಗಿ ವಿಭಜನೆಯಾಯಿತು ಮತ್ತು ನಂತರ ಅವರು ಪರಸ್ಪರ ವಿರುದ್ಧವಾಗಿ ವಾದ ವಿವಾದ ತುತ್ತತುದಿಗೇರಿತು ಮತ್ತು ಹೀಗೆ ಇದನ್ನೆಲ್ಲಾ ನೋಡಿದ ಮೇಲೆ ನನ್ನ ಮನಸ್ಸಿನಲ್ಲಿ ಒಂದಿಷ್ಟು ಯೋಚನೆಗಳು ಬಂದು ಪೇಪರ್ ಮೇಲೆ ಬರೆಯದೇ ಇರಲಾಗಲಿಲ್ಲ. 70 ರ ದಶಕದಲ್ಲಿ, ಜೆ. ಜೆ. ಸ್ಕೂಲ್ ಆಫ್ ಆರ್ಟ್‌ನ ಶಿಲ್ಪಕಲಾ ವಿಭಾಗದಲ್ಲಿ ಸಾರನಾಥದ ಅಶೋಕ ಸ್ತಂಭದ ಶಿಲ್ಪದ 18 ಅಡಿ ಎತ್ತರದ ಪ್ರತಿಕೃತಿಯನ್ನು ನಿರ್ಮಿಸಲಾಗಿತ್ತು. ಶಿಲ್ಪಕಲೆಯ ವಿಭಾಗವನ್ನು ಪ್ರವೇಶಿಸಿದಮೇಲೆ, ನಾಲ್ಕು ಬೃಹತ್ ಸಿಂಹಗಳ ಬಿಳಿ ಶಿಲ್ಪಗಳು ಅದರ ಭವ್ಯತೆ ಮತ್ತು ಸೊಗಸಾದ ವಿನ್ಯಾಸದಿಂದ ಅಲ್ಲಿಗೆ ಬಂದ ಎಲ್ಲರ ಗಮನವನ್ನು ...

ಗಜಾನನ ನಾರಾಯಣ ಜಾಧವ್

ಗಜಾನನ ನಾರಾಯಣ ಜಾಧವ್ ಒಬ್ಬ ಪ್ರಸಿದ್ಧ ಚಿತ್ರಕಾರರಾಗಿದ್ದರು. ಅವರು ಚಿತ್ರಗಳಲ್ಲಿ ನೈಜತೆಯನ್ನು ತೋರಿಸುತ್ತಿದ್ದರು. ಅವರು ಆಧುನಿಕ ಕಲೆಯನ್ನೂ ಗಮನಿಸುತ್ತಿದ್ದರು. ಚಿತ್ರಕಾರ ಗಜಾನನ ನಾರಾಯಣ ಜಾಧವ್ ಅಲಿಯಾಸ್ ಗ. ನಾ. ಜಾಧವ್ ಅವರು 1917 ರ ನವೆಂಬರ್ 14 ರಂದು ಕೊಲ್ಲಾಪುರದಲ್ಲಿ ಜನಿಸಿದರು. ಅವರು ತನ್ನ ಮ್ಯಾಗಜೀನ್ ಕವರ್‌ಗಳು, ವಿವಿಧ ಲೇಖನಗಳು, ಕಥೆಗಳ ರೇಖಾಚಿತ್ರಗಳು, ಭಾವಚಿತ್ರಗಳು ಮತ್ತು ನಿಸರ್ಗ ಚಿತ್ರಗಳಿಂದ ಹೆಸರುಗಳಿಸಿದ್ದರು. ಅವರ ಕರ್ಮಭೂಮಿ ಮುಂಬೈ-ಪುಣೆಯಾಗಿತ್ತು. ಅವರ ತಾಯಿಯ ಹೆಸರು ತಾನಾಬಾಯಿ. ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದರು. ಹದಿನೆಂಟನೇ ವಯಸ್ಸಿನಲ್ಲಿ ಅವರು ಚಿತ್ರಕಲೆಯ ಗ್ರೇಡ್ ಪರೀಕ್ಷೆಗಳಲ್ಲಿ ಉನ್ನತ  ಉನ್ನತ ಅಂಕಗಳನ್ನು ಗಳಿಸಿ ಯಶಸ್ಸನ್ನು ಸಾಧಿಸಿದರು. ಇಲ್ಲಿಂದ ಅವರ ಚಿತ್ರಕಲಾ ಪಯಣ ಆರಂಭವಾಯಿತು. ಮನೆಯಲ್ಲಿಯೇ ಗಣಪತರಾವ್ ವಡಂಗೇಕರ್ ಮತ್ತು ಬಾಬುರಾವ್ ಪೇಂಟರ್ ಅವರಿಂದ ಚಿತ್ರಕಲೆಯ ಪಾಠವನ್ನು ಕಲಿಯತೊಡಗಿದರು. ನಂತರ ಬಾಬಾ ಗಜಬರ್, ಮಾಧವರಾವ್ ಬಾಗಲ್, ಚಿತ್ರಕಲಾವಿದ ಜಾಂಭಾಲಿಕರ್, ಈ ಗುರುಗಳಿಂದ ಮಾರ್ಗದರ್ಶನ ಪಡೆದರು. ಅವರು 1942 ರಲ್ಲಿ ಇಂದಿರಾ ಕದಮ್ ಅವರನ್ನು ವಿವಾಹವಾದರು.  ರೇಖಾಚಿತ್ರದ ಮೇಲಿನ ಅವರ ಪಾಂಡಿತ್ಯವನ್ನು ಕಂಡ ಮಾಧವರಾವ್ ಬಾಗಲ್ ಅವರು ಜಾಧವ್ ಅವರನ್ನು ಶಂಕರರಾವ್ ಕಿರ್ಲೋಸ್ಕರ್ ಅವರ ಬಳಿಗೆ ಕಳುಹಿಸಿದರು....

ಸಾವ್ಲಾರಾಮ್ ಹಲ್ದಣ್ಕರ್ - ಜಯ ಸಾಲ್ಯಾನ್, ಮುಂಬೈ.

Image
ಸಾವ್ಲಾರಾಮ್ ಹಲ್ದ ಣ್ ಕರ್   ಸರಳವಾದ ಸುಲಭ ವಿಷಯದಿಂದ ವಿಶಾಲ ದೃಷ್ಟಿಕೋನವನ್ನು ವ್ಯಕ್ತಪಡಿಸುವ ಕೌಶಲ್ಯ ಶ್ರೀ . ಸಾವ್ಲಾರಾಮ್ ಲಕ್ಷ್ಮಣ್ ಹಲ್ದ ಣ್ ಕರ್ ಅವರ ವರ್ಣಚಿತ್ರಗಳಲ್ಲಿತ್ತು . ಚಿತ್ರಕಲೆಯ ಜಲವರ್ಣ ಮತ್ತು ತೈಲವರ್ಣ ಮಾಧ್ಯಮಗಳಲ್ಲಿ ಅವರು ವಿಶೇಷ ಖ್ಯಾತಿ ಹೊಂದಿದ್ದರು . ೨೯ ನವೆಂಬರ್ ೧೮೮೨ , ಕೊಂಕಣದ ಸಾವಂತ್ವಾಡಿಯಲ್ಲಿ ಜನಿಸಿದ ಅವರು ತನ್ನ ಮೂರನೆಯ ವಯಸ್ಸಿನಲ್ಲಿ ತಂದೆಯನ್ನು ಕಳಕೊಂಡರು . ಬಾಲ್ಯದ ಕಷ್ಟಕರ ಪರಿಸ್ಥಿತಿಯಲ್ಲೂ ಅವರ ಮನಸ್ಸು ಚಿತ್ರಕಲೆಯತ್ತ ಆಕರ್ಷಿತವಾಗತೊಡಗಿತ್ತು . ಕಲಾ ಶಿಕ್ಷಕ ಶ್ರೀ ಎನ್ . ಎಸ್ . ಮಾಲಂಕರ್ ಅವರ ಕಲಾತ್ಮಕತೆಯನ್ನು ನೋಡಿ , ಗ್ರೇಡ್ ಪರೀಕ್ಷೆಯನ್ನು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿದರು . ೧೯೦೩ ರಲ್ಲಿ , ಅವರು ಸರ್ ಜೆ . ಜೆ . ಕಲೆ ಪ್ರವೇಶ ಪರೀಕ್ಷೆ ನೀಡಿ ಕಾಲೇಜಿಗೆ ಪ್ರವೇಶಿಸಿದರು . ಅಲ್ಲಿ ಅವರು ಪ್ರಮುಖ ಕಲಾ ಶಿಕ್ಷಕರಾಗಿದ್ದ ಗಣಪತ್ ರಾವ್ ಕೇದಾರಿ , ತ್ರಿದಾಂದ್ , ಆಗಾಸ್ಕರ್ , ವಾಲ್ಟರ್ ರೆಬ್ರೊಥಾಮ್ ಅವರನ್ನು ಭೇಟಿಯಾಗಿ ಅವರಿಂದ ಅಮೂಲ್ಯವಾದ ಮಾರ್ಗದರ್ಶನ ಪಡೆದರು . ಚಿತ್ರಕಲೆಯಲ್ಲಿ ಅವರು ಪಡೆದ ಪ್ರಾವೀಣ್ಯತೆಯಿಂದಾಗಿ ೧೯೦೭ ರಿಂದ ಒಬ್ಬ ವರ್ಣಚಿತ್ರಕಾರನಾಗಿ ಪ್ರಸಿದ್ಧರಾದರು . ಅವರ ವರ್ಣಚಿತ್ರಗಳು ಮುಂಬೈ , ಚೆನ್ನೈ , ಕೋಲ್ಕತಾ , ಮತ್ತು ಶಿಮ್ಲಾದಲ್ಲಿ ನಡೆದ ಕಲಾ ಪ್ರದರ್ಶನದ...

ಮಹಾರಾಷ್ಟ್ರದಲ್ಲಿನ ನಿಗೂಢ ಸ್ಥಳಗಳು... - ಜಯ ಸಾಲ್ಯಾನ್ (ಮುಂಬೈ)

Image
ಮಹಾರಾಷ್ಟ್ರದಲ್ಲಿನ ನಿಗೂಢ   ಸ್ಥಳಗಳು ... ನಾವು ಹೆದರಲು ಇಷ್ಟಪಡುತ್ತೇವೆಯೇ ?  ಈಗ ನೀವು ಏನಿದು, ಹೀಗೆ  ಪ್ರಶ್ನೆ ಮಾಡುತ್ತೀರಿ? ಅಂತ ಕೇಳಬಹುದು. ಹೇ, ನಮ್ಮಲ್ಲಿ ಕೆಲವರು ನಿಜವಾಗಿಯೂ ಭಯಪಡುವುದನ್ನು ಇಷ್ಟಪಡುತ್ತಾರೆ! ನೀವು ಒಂದು ಉದಾಹರಣೆಯನ್ನು ತೆಗೆದುಕೊಳ್ಳಬೇಕೆಂದಿದ್ದರೆ , ಈಗ ನೋಡಿ ಸಿನಿಮಾ ಬಿಡುಗಡೆಯಾದಾಗ, ದೆವ್ವದ ಸಿನಿಮಾ, ಭಯಾನಕ, ನಿಗೂಢವಾಗಿರುವುದು ನಮಗೆ ತಿಳಿದಿದ್ದರೂ ನಾವು ಹಣ ಕೊಟ್ಟು ಆ ಭಯವನ್ನು ಖರೀದಿಸುತ್ತೇವೆ... ತಮಾಷೆ ಅನಿಸಿದರೂ ಇದು ನಿಜ ಅಲ್ವಾ... ಮಾಲ್ ಗಳಲ್ಲಿ ಕೂಡ ನೀವು ಇತ್ತೀಚಿನ ದಿನಗಳಲ್ಲಿ ಘೋಸ್ಟ್ ಹೌಸ್ (Ghost House) ನೋಡಬಹುದು ! ಹಣ ಕೊಟ್ಟು ಟಿಕೆಟ್ ಖರೀದಿಸಿ ಒಳಗೆ ನಮ್ಮನ್ನು ನಾವೇ ಹೆದರಿಸುತ್ತೇವೆ . ಸ್ನೇಹಿತರೇ , ನಮ್ಮ ಮಹಾರಾಷ್ಟ್ರದಲ್ಲಿಯೂ   ಕೆಲವು ನಿಗೂಢ ಮತ್ತು ರಹಸ್ಯಾತ್ಮಕ ಪ್ರದೇಶಗಳಿವೆ , ಈ ಪ್ರದೇಶದೊಟ್ಟಿಗೆ ಕೆಲವು ಭೂತದ ಕಥೆಗಳನ್ನು ಜೋಡಿಸಲಾಗಿದೆ . ಈ ಲೇಖನದಲ್ಲಿ ಅಂತಹ ಕೆಲವು ಸ್ಥಳಗಳ ಬಗ್ಗೆ ನಿಮಗೆ ಮಾಹಿತಿ ನೀಡುವ ಪ್ರಾಮಾಣಿಕ ಪ್ರಯತ್ನ . ಮುಂಬೈಯಲ್ಲಿನ   ಡಿಸುಜಾ ಚಾವ್ಲ್: ೨೦ / ೩೦ ವರ್ಷಗಳ ಹಿಂದೆ   ಮುಂಬೈನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಚಾವ್ಲ್ ( ವಠಾರ ) ಗಳು ಇದ್ದವು . ಈ ಚಾವ್ಲ್ ಗಳು ವಿಭಿನ್ನ ವಾದ ಜೀವನ ಸಂಸ್ಕೃತಿಯನ್ನು ಹೊಂದಿದ್ದವು . ಒಬ...