ಮಹಾರಾಷ್ಟ್ರದಲ್ಲಿನ ನಿಗೂಢ ಸ್ಥಳಗಳು... - ಜಯ ಸಾಲ್ಯಾನ್ (ಮುಂಬೈ)
ನಾವು ಹೆದರಲು ಇಷ್ಟಪಡುತ್ತೇವೆಯೇ? ಈಗ ನೀವು ಏನಿದು, ಹೀಗೆ ಪ್ರಶ್ನೆ ಮಾಡುತ್ತೀರಿ? ಅಂತ ಕೇಳಬಹುದು. ಹೇ, ನಮ್ಮಲ್ಲಿ ಕೆಲವರು ನಿಜವಾಗಿಯೂ ಭಯಪಡುವುದನ್ನು ಇಷ್ಟಪಡುತ್ತಾರೆ!
ನೀವು
ಒಂದು ಉದಾಹರಣೆಯನ್ನು ತೆಗೆದುಕೊಳ್ಳಬೇಕೆಂದಿದ್ದರೆ, ಈಗ ನೋಡಿ ಸಿನಿಮಾ ಬಿಡುಗಡೆಯಾದಾಗ, ದೆವ್ವದ ಸಿನಿಮಾ, ಭಯಾನಕ, ನಿಗೂಢವಾಗಿರುವುದು
ನಮಗೆ ತಿಳಿದಿದ್ದರೂ ನಾವು ಹಣ ಕೊಟ್ಟು ಆ ಭಯವನ್ನು ಖರೀದಿಸುತ್ತೇವೆ... ತಮಾಷೆ ಅನಿಸಿದರೂ ಇದು ನಿಜ
ಅಲ್ವಾ...
ಮಾಲ್
ಗಳಲ್ಲಿ ಕೂಡ ನೀವು ಇತ್ತೀಚಿನ ದಿನಗಳಲ್ಲಿ ಘೋಸ್ಟ್ ಹೌಸ್ (Ghost House) ನೋಡಬಹುದು! ಹಣ ಕೊಟ್ಟು ಟಿಕೆಟ್
ಖರೀದಿಸಿ ಒಳಗೆ ನಮ್ಮನ್ನು ನಾವೇ ಹೆದರಿಸುತ್ತೇವೆ. ಸ್ನೇಹಿತರೇ, ನಮ್ಮ ಮಹಾರಾಷ್ಟ್ರದಲ್ಲಿಯೂ ಕೆಲವು
ನಿಗೂಢ ಮತ್ತು ರಹಸ್ಯಾತ್ಮಕ ಪ್ರದೇಶಗಳಿವೆ, ಈ ಪ್ರದೇಶದೊಟ್ಟಿಗೆ ಕೆಲವು
ಭೂತದ ಕಥೆಗಳನ್ನು ಜೋಡಿಸಲಾಗಿದೆ.
ಈ
ಲೇಖನದಲ್ಲಿ ಅಂತಹ ಕೆಲವು ಸ್ಥಳಗಳ ಬಗ್ಗೆ ನಿಮಗೆ ಮಾಹಿತಿ ನೀಡುವ ಪ್ರಾಮಾಣಿಕ ಪ್ರಯತ್ನ.
ಮುಂಬೈಯಲ್ಲಿನ ಡಿಸುಜಾ ಚಾವ್ಲ್:
೨೦/೩೦ ವರ್ಷಗಳ ಹಿಂದೆ ಮುಂಬೈನಲ್ಲಿ
ಸಾಕಷ್ಟು ಸಂಖ್ಯೆಯಲ್ಲಿ ಚಾವ್ಲ್ (ವಠಾರ)ಗಳು ಇದ್ದವು. ಈ ಚಾವ್ಲ್ ಗಳು
ವಿಭಿನ್ನ ವಾದ ಜೀವನ ಸಂಸ್ಕೃತಿಯನ್ನು ಹೊಂದಿದ್ದವು.
ಒಬ್ಬರ
ಮನೆಯಒಳಗೆ ಇನ್ನೊಬ್ಬರು ಇಣುಕಿ ನೋಡಬಹುದಿತ್ತು. ಒಂದು ಕುಟುಂಬಕ್ಕೆ ಬಂದ ಅತಿಥಿಗಳು ಇಡೀ ಚಾವ್ಲ್ ನ ಅತಿಥಿಗಳಾಗಿಬಿಡುತ್ತಿದ್ದರು. ಕಾಲಕ್ರಮೇಣ ಈ ಚಾವ್ಲ್ನ ಜಾಗದಲ್ಲಿ
ದೊಡ್ಡ ದೊಡ್ಡ ಕಟ್ಟಡಗಳು, ಮಾಲ್ ಗಳು ನಿಂತಿರುವುದನ್ನು ನಾವು ಕಾಣಬಹುದು. ಆದರೆ ಇಂದಿಗೂ ಕೆಲವು ಚಾವ್ಲ್ ಗಳು ಮುಂಬೈನಲ್ಲಿಅಸ್ತಿತ್ವದಲ್ಲಿವೆ.
ಮುಂಬೈನ
ಡಿಸುಜಾ ಚಾಲ್ ನಲ್ಲಿ ಮಹಿಳೆಯೊಬ್ಬರು ಬಾವಿಯಿಂದ ನೀರು ತರಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಇಂದಿಗೂ ಆ ಮಹಿಳೆ ಬಾವಿಯ
ಹತ್ತಿರ ನಡೆದಾಡುವ ಕಥೆಗಳು ಬಹಳ
ಜನರಿಂದ ಕೇಳಸಿಗುತ್ತವೆ. ಆ ಮಹಿಳೆಯ ಮುಖವು
ತುಂಬಾ ಭಿಭತ್ಸ ಮತ್ತು ಭಯಾನಕವಾಗಿದೆ ಎಂದು ನೋಡಿದವರು ಹೇಳುತ್ತಾರೆ.
ಪ್ರಯಾಣಿಕರ
ಈ ಅನುಭವದ ನಂತರ ಈಗ ಈ ಕೊಠಡಿಯನ್ನು
ಮುಚ್ಚಲಾಗಿದೆ.
ಶನಿವಾರವಾಡ - ಪುಣೆ : ಪುಣೆ ತಿಥೇ ಕಾಯ್ ಉಣೆ! (ಪುಣೆಯಲ್ಲಿ ಎಲ್ಲವೂ ಸಿಗುವುದು) ವಿದ್ಯೆಯ ತವರೂರಾದ ಪುಣೆಯಲ್ಲಿನ ಪೇಶ್ವೆಯವ್ರ ಶನಿವಾರವಾಡವು ಅತ್ಯಂತ ಪ್ರಸಿದ್ಧವಾದ ವಾಸ್ತುವಾಗಿದೆ.
ಈ
ಶನಿವಾರವಾಡಕ್ಕೆ ಸಂಬಂಧಿಸಿದಂತೆ ಹಲವು ಕಥೆಗಳು ಕಿವಿಗೆ ಬೀಳುತ್ತವೆ.
ಈ
ಶನಿವಾರವಾಡದಲ್ಲಿ ರಘುನಾಥರಾವ್ ಅವರನ್ನು ಬಂಧನದಲ್ಲಿಡುವ ಆದೇಶ
ನೀಡಿದ ನಾರಾಯಣರಾವ್ ಪೇಶ್ವೆಯವರ ಆದೇಶವನ್ನು ಆನಂದಿಬಾಯಿಯು ಬದಲಾಯಿಸಿ ಅವರ (ರಘುನಾಥರಾವ್ ಅವರ) ಹತ್ಯೆ ಮಾಡಲಾಗಿತ್ತು. ಅವರ ಅಂತಿಮ ಚಿತ್ಕಾರ "ಕಾಕಾ ಮಲಾ ವಾಚ್ವಾ" (ಚಿಕ್ಕಪ್ಪ ನನ್ನನ್ನು ಉಳಿಸಿ) ಇನ್ನೂ ಈ ಅರಮನೆಯಲ್ಲಿ ಕೇಳಬರುತ್ತದೆ.
ಅವರ
ಆತ್ಮ
ಈ ಅರಮನೆಯಲ್ಲಿ ಅಲೆದಾಡುತ್ತಿದೆ ಎಂದು ಅನೇಕರು ಹೇಳುತ್ತಾರೆ. ಅವರ ಅಳು ಅನೇಕರು ಕೇಳಿರುವುದನ್ನು
ಹೇಳಲಾಗುತ್ತದೆ. ಇಂದಿಗೂ ಪುಣೆಯಂತಹ ಆಧುನಿಕ ನಗರದಲ್ಲಿ ಈ ವಾಸ್ತುವನ್ನು ಒಂದು
ರಹಸ್ಯವೆಂದು ನಾವು ಕಾಣುತ್ತೇವೆ.
ರಾಜ್ ಕಿರಣ್
ಹೋಟೆಲ್
- ಲೋಣಾವಲಾ : ತಂಪಾದ ಗಾಳಿಯ ತಾಣ ಲೋಣಾವಲ! ಈ ಸ್ಥಳಕ್ಕೆ
ಭೇಟಿ ನೀಡಲು ಮತ್ತು ನಿಸರ್ಗದ ಆನಂದವನ್ನು ಅನುಭವಿಸಲು ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಬರುತ್ತಾ
ಇರುತ್ತಾರೆ. ರಾಜಕಿರಣ್ ಈ ಲೋಣಾವಲದ ಒಂದು ಪ್ರಸಿದ್ಧ ಹೋಟೆಲ್!
ಈ
ಹೋಟೆಲ್ನ ನೆಲಮಹಡಿಯಲ್ಲಿರುವ ಒಂದು ಕೊಠಡಿಯಲ್ಲಿ ಯಾರಾದರೂ ಒಂದು ರಾತ್ರಿ ಕಳೆದರೆ ಮರುದಿನ ಹೋಟೆಲ್ನಿಂದ ಹೊರಗೆ ಬರುವಾಗ ಏನಾದರೂ ಒಂದು ಕಥೆ ತೆಗೆದುಕೊಂಡೇ ಬರುತ್ತಾರೆ.
ಈ
ಹೋಟೆಲ್ ಕೋಣೆಯಲ್ಲಿ ಉಳಿದುಕೊಂಡ ನಂತರ ಪ್ರಯಾಣಿಕರು ಅದನ್ನು ಹೀಗೆ ವರ್ಣಿಸುತ್ತಾರೆ, ರಾತ್ರಿಯಲ್ಲಿ ಗಾಳಿ ಇದ್ದಕ್ಕಿದ್ದಂತೆ ಬೀಸಲಾರಂಭಿಸಿತು, ಕಿಟಕಿಗಳ ಪರದೆ ಹಾರಲು ಪ್ರಾರಂಭಿಸಿತು. ಕೆಲವರ ಅನುಭವದಂತೆ, ರಾತ್ರಿಯಲ್ಲಿ ಮಲಗಿದ ನಂತರ, ಯಾರಾದರೂ ಬೆಡ್ ಶೀಟನ್ನು ಎಳೆಯುತ್ತಿರುವ ಭ್ರಮೆಯಾಗುತ್ತದೆ.
ಹೋಟೆಲ್ ತಾಜ್
- ಮುಂಬೈ:
ಮುಂಬೈಗೆ ಬಂದ ನಂತರ
ಹೋಟೆಲ್ ತಾಜ್ ನೋಡದೆ ಸಾಮಾನ್ಯವಾಗಿ ಯಾವುದೇ ಪ್ರವಾಸಿಗರು
ಹಿಂತಿರುಗುವುದಿಲ್ಲ. ಗೇಟ್ವೇ ಆಫ್ ಇಂಡಿಯಾದ ಒಂದು ಬದಿಯಲ್ಲಿ ವಿಶಾಲ ಸಮುದ್ರ ಇದ್ದರೆ ಇನ್ನೊಂದು
ಬದಿಯಲ್ಲಿ ತನ್ನ ಶ್ರೀಮಂತಿಗೆಯ ಪೊಗರಿನಿಂದ ಹೋಟೆಲ್ ತಾಜ್ ನಿಂತಿದೆ!
ಗೇಟ್ವೇ
ಆಫ್ ಇಂಡಿಯಾದ ಒಂದು ಬದಿಯಲ್ಲಿ ವಿಶಾಲ ಸಮುದ್ರ ಇದ್ದರೆ ಇನ್ನೊಂದು ಬದಿಯಲ್ಲಿ ತನ್ನ ಶ್ರೀಮಂತಿಗೆಯ ಪೊಗರಿನಿಂದ ಹೋಟೆಲ್ ತಾಜ್ ನಿಂತಿದೆ!
ಈ ಹೋಟೆಲ್ನ ವೆಚ್ಚವು ಸಾಮಾನ್ಯ ಜನರ ಕೈಗೆಟುಕದ ಮಾತು.
ಆದರೆ
ಕನಿಷ್ಠ ಹೊರಗೆ ನಿಂತು ಫೋಟೋಗಳನ್ನು ತೆಗೆದುಕೊಳ್ಳುವ ಆಸೆ ಅವನದ್ದಾಗಿರುತ್ತದೆ.
ಹೀಗಿದೆ
ಹೋಟೆಲ್ ತಾಜ್... ಆದರೆ ಈ ಹೋಟೆಲ್ ನಿರ್ಮಿಸಿದ
ವಾಸ್ತುಶಿಲ್ಪಿ ಈ ಹೋಟೆಲ್ನಲ್ಲಿಯೇ ಮೃತ್ಯುಮುಖಿಯಾಗಿರುವ
ವಿಷಯ ಕೆಲವೇ ಜನರಿಗೆ ತಿಳಿದಿದೆ.
ಅವನು
ವಿನ್ಯಾಸಗೊಳಿಸಲು ಬಯಸಿದ ಯಾವುದೇ ವಿಧಾನವು ಯಶಸ್ವಿಯಾಗದಕಾರಣ ಈ ಹೋಟೆಲ್ನಲ್ಲಿ
ಆತ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಅಂದಿನಿಂದ
ಭೇಟಿ ನೀಡುವ ಅತಿಥಿಗಳ ಪ್ರಕಾರ ಈ ಹೋಟೆಲ್ನಲ್ಲಿ
ಯಾವಾಗಲೂ ಯಾರೊಬ್ಬರ ನೆರಳು ಸುತ್ತಾಡುತ್ತಿರುತ್ತದೆ.
ಸಂಜಯ್ ಗಾಂಧಿ
ರಾಷ್ಟ್ರೀಯ
ಉದ್ಯಾನ
– ಮುಂಬೈ:
ಬೋರಿವಲಿಯ
ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವು ಬಹಳ ಪ್ರಸಿದ್ಧವಾಗಿದ್ದು ಬೆಳಗಿನಿಂದ ಸಂಜೆಯವರೆಗೆ ಇಲ್ಲಿ ಸಾಕಷ್ಟು ಜನರು ಬರುತ್ತಾ ಇರುತ್ತಾರೆ.
ಮಾರ್ನಿಂಗ್
ವಾಕ್ ಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹತ್ತಿರದ ನಿವಾಸಿಗಳು ಇಲ್ಲಿಗೆ ಬರುವುದನ್ನು ಇಷ್ಟ ಪಡುತ್ತಾರೆ.
ಈ
ನೆರಳುಗಳು ಹೆಚ್ಚಾಗಿ ಗಾಳಿಯಲ್ಲಿ ಕಂಡುಬರುತ್ತವೆ ಎಂದು ಅನೇಕ ಜನರು ಹೇಳುತ್ತಾರೆ. ಹಲವು ಜನರು ಇಲ್ಲಿಯ ಗಾಳಿಯೊಟ್ಟಿಗೆ ಕೆಲವು ಅದೃಶ್ಯ ಅಸ್ತಿತ್ವದ ಅಲೆದಾಡುವುದಾಡುವಿಕೆಯನ್ನು ಗಮನಿಸಿದ್ದಾರೆ.
ಇಲ್ಲಿನ
ಭದ್ರತಾ ಸಿಬ್ಬಂದಿವರ್ಗದವರೂ ಗಾಳಿಯಲ್ಲಿ
ನೆರಳುಗಳು ಕಣ್ಮರೆಯಾಗುವುದನ್ನು ಹಲವು ಬಾರಿ ಕಂಡಿದ್ದುಂಟು .
ಈ
ರಾಷ್ಟ್ರೀಯ ಉದ್ಯಾನವು ಮುಂಬೈನ ಭಯಾನಕ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ
ಗಾಢವಾದ ಛಾಯೆಯು ಹೆಚ್ಚಾಗಿ ಕಂಡುಬರುವುದೆಂದು ಹಲವರ ಹೇಳಿಕೆಯಿದೆ.
ಹಲವೊಮ್ಮೆ
ಇಲ್ಲಿ ಹಾರುವ ಪಕ್ಷಿಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗುವ ಅಥವಾ ಸಾವನ್ನಪ್ಪುವ ಘಟನೆಗೆ ನಿಖರವಾದ ಕಾರಣ ಈ ತನಕ ತಿಳಿದುಬಂದಿಲ್ಲ.
ಮಲಬಾರ್ ಹಿಲ್
ನ (ಬೆಟ್ಟದ) - ಮೌನ
ಗೋಪುರ
(ಟವರ್
ಆಫ್
ಸೈಲೆನ್ಸ್):
ಮುಂಬೈನ ಮಲಬಾರ್ ಹಿಲ್ ಎಂಬ ಪ್ರಸಿದ್ಧ ಪ್ರದೇಶದಲ್ಲಿ, ಟವರ್ ಆಫ್ ಸೈಲೆನ್ಸ್ ಎನ್ನುವ ಪ್ರಸಿದ್ಧ ಪಾರ್ಸಿ ಸ್ಮಶಾನಭೂಮಿಯೊಂದು ಇದೆ. ಈ ಸ್ಥಳದಲ್ಲಿ ರಾತ್ರಿ
ಹೊತ್ತಿನಲ್ಲಿ ಅತ್ಯಂತ
ಸುಂದರ ಯುವತಿಯನ್ನು ನೋಡಿದ್ದೇವೆ ಎಂದು ಅನೇಕ ಜನರು ಹೇಳುತ್ತಾರೆ. ಈ ಯುವತಿಯು ಅಲ್ಲಿಂದ
ಹೋಗುವ - ಬರುವ ಜನರನ್ನು
ನಿಲ್ಲಿಸಿ ಲಿಫ್ಟ್ ಕೇಳುತ್ತಾಳೆ.
ಇದಲ್ಲದೆ,
ಜನರು ಯಾವಾಗಲೂ
ಈ ಸ್ಥಳದಲ್ಲಿ ಒಂದು ಪಾರ್ಸಿ ಕುಟುಂಬವನ್ನು ಅಲೆದಾಡುವುದನ್ನು ಕಂಡಿದ್ದಾರೆ. ಇದಲ್ಲದೆ, ಜನರು ಯಾವಾಗಲೂ ಈ ಸ್ಥಳದಲ್ಲಿ ಕಾರು
ಅಪಘಾತ ಸಂಭವಿಸಿದ ಒಂದು ಪಾರ್ಸಿ ಕುಟುಂಬವನ್ನು ಅಲೆದಾಡುವುದನ್ನು ಕಂಡಿದ್ದಾರೆ. ನಮ್ಮ ಕಾರಿಗೆ ಹಾನಿ(ಆಕ್ಸಿಡೆಂಟ್)ಯಾಗಿದೆ ಎಂದು ಹೇಳುವ ಮೂಲಕ ಈ ಕುಟುಂಬವು ತಮ್ಮ
ಬಳಿಗೆ ಬರಲು ಇತರರನ್ನು ಆಕರ್ಷಿಸುತ್ತದೆ ಮತ್ತು ಸಹಾಯಕ್ಕಾಗಿ ವಿನಂತಿಸುತ್ತದೆ.
ಇಂವರಿಂದಾಗಿ
ಕಹಿ ಅನುಭವಗಳನ್ನು ಹೊಂದಿರುವ ಅನೇಕ ಉದಾಹರಣೆಗಳು ಜನರಿಂದ ತಿಳಿದು ಬಂದಿದೆ.
ವೈದ್ಯಕೀಯ ಕಾಲೇಜು
- ನಾಗ್
ಪುರ್: ನಾಗ್ಪುರದ ವೈದ್ಯಕೀಯ ಕಾಲೇಜು ಬಹಳ ಪ್ರಸಿದ್ಧವಾಗಿದ್ದು
ಬಡವರ ಪಾಲಿಗೆ ಇದೊಂದು ವರದಾನವೇ ಸರಿ. ಕಡಿಮೆ ದರ ಮತ್ತು ಉಚಿತ ಚಿಕಿತ್ಸೆ ಇರುವುದರಿಂದ ಯಾವಾಗಲೂ
ಇಲ್ಲಿ ದೊಡ್ಡ ಜನಸಂದಣಿ ಸೇರಿರುತ್ತದೆ. ಈ ವೈದ್ಯಕೀಯ ಕಾಲೇಜು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು
ಯಾವಾಗಲೂ ನಿಗೂಢ ವಾಗಿ ಕಾಣುತ್ತದೆ.
ಇದರ
ಹಿಂದಿನ ಅನೇಕ ಕಥೆಗಳು ಕೇಳಸಿಗುತ್ತವೆ. ಶವಾಗಾರದ ಪರಿಸರವನ್ನು ಗೀಳುಹಿಡಿದ ಸ್ಥಾನವೆಂದೇ ಕರೆಯಲಾಗುತ್ತದೆ. ಈ ಸ್ಥಾನದಲ್ಲಿ ದೆವ್ವಗಳು
ಸುತ್ತುತ್ತಿರುವ ಕಥೆಗಳನ್ನು ಇವತ್ತೂ ಅನೇಕರು ಹೇಳುತ್ತಾರೆ.
ನರ್ಸ್
ತರಬೇತಿ ಪಡೆಯುವ ಹುಡುಗಿಯರು ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನರ್ಸ್ ತರಬೇತಿ ಪಡೆಯುವ ಹುಡುಗಿಯರು ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯವು ಇಲ್ಲಿನ
ವಾತಾವರಣವನ್ನು ಹೆಚ್ಚು ಭಯಾನಕಗೊಳಿಸಿದೆ. ಸಂಜೆ ಬೀಳುತ್ತಿದ್ದಂತೆಯೇ, ಈ ಪ್ರದೇಶವು ನಿರ್ಜನವಾಗುತ್ತದೆ.
ಮುಕೇಶ್ ಮಿಲ್ಸ್,
ಕೊಲಾಬಾ
- ಮುಂಬೈ: ಮುಕೇಶ್ ಮಿಲ್ಸ್ ನ್ನು ಅನೇಕ ಆತ್ಮಗಳ ನಿವಾಸಸ್ಥಾನವೆಂದೇ ನೋಡಲಾಗುತ್ತದೆ. ಇದು
ತುಂಬಾ ಭಯಾನಕ ಸ್ಥಳವಾಗಿದ್ದರಿಂದ ಯಾರೂ ಇಲ್ಲಿಗೆ ಬರುವ ಧೈರ್ಯ ಮಾಡುವುದಿಲ್ಲ. ಈ ಹಿಂದೆ
ಅನೇಕ ರಹಸ್ಯಮಯ ಮತ್ತು ಭೂತ-ಪ್ರೇತಗಳಮೇಲೆ ಆಧಾರಿತ ಚಲನಚಿತ್ರಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ಆದರೆ ಈ ದಿನಗಳಲ್ಲಿ, ಯಾರು
ಈ ಗಿರಣಿಯಲ್ಲಿ ಚಿತ್ರೀಕರಣ ಮಾಡುವಬಗ್ಗೆ ಮಾತನಾಡಿದರೂ ಸಹ, ಇಡೀ ತಂಡಕ್ಕೆ ಮೈ ಬೆವರುತ್ತದೆ. ಇಲ್ಲಿ
ಬರುವವರಿಗೆ, ಅನೇಕ ವಿಚಿತ್ರ ಅನುಭವಗಳನ್ನು ಎದುರಿಸಬೇಕಾಗುತ್ತದೆ.
ಇಲ್ಲಿ
ಚಿತ್ರೀಕರಣದ ಸಮಯದಲ್ಲಿ ಅನೇಕ ಭಯಾನಕ ಅನುಭವಗಳನ್ನು ಪಡೆದ ಕಲಾವಿದರು ಈ ಸ್ಥಳದ ಹೆಸರಿನಿಂದಲೇ
ತತ್ತರಿಸುವಂತೆ ಕಾಣುತ್ತಾರೆ.
ಮುಕೇಶ್
ಮಿಲ್ಸ್ ಯಾವಾಗಲೂ ಭಾರತದ ಅತ್ಯಂತ ಭಯಾನಕ ಸ್ಥಳಗಳಲ್ಲಿ ಅಗ್ರಕ್ರಮವನ್ನು ಹೊಂದಿರುತ್ತದೆ.
ಗ್ರ್ಯಾಂಡ್ ಪ್ಯಾರಡೀ
ಟವರ್ಸ್
- ಮುಂಬೈ:
ಈ ಟಾವರ್ನ
ನಿರ್ಮಾಣದ ಬಳಿಕ ಸುಮಾರು 20 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರೀ ಚಿಕ್ಕ ಮಕ್ಕಳು ಮಾತ್ರವಲ್ಲ, ವೃದ್ಧರು
ಸಹ ಈ ಕಟ್ಟಡದಲ್ಲಿ
ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅನೇಕರು
ತಮ್ಮ ಮಕ್ಕಳೊಂದಿಗೆ ಇಲ್ಲಿಯ ಕಿಟಕಿಯಿಂದ ಹಾರಿ ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ. ಮನೆಕೆಲಸ ಮಾಡುವ ಹೆಂಗಸರು (ಕಾಂವಾಳಿ ಬಾಯಿ) ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳೂ ಇವೆ.
ಈ
ಎಲ್ಲಾ ಘಟನೆಗಳ ಹಿಂದೆ ಒಂದು ಅದೃಶ್ಯ ದುಷ್ಟ ಶಕ್ತಿ ಕಾರ್ಯರತ ವಾಗಿದೆಯೆಂದು ಹೇಳಲಾಗುತ್ತದೆ. ಎಂಟನೇ
ಮಹಡಿಯಲ್ಲಿ ಅತಿ ಹೆಚ್ಚು ಆತ್ಮಹತ್ಯೆಗಳು ಸಂಭವಿಸಿವೆ.
ಇಂತಹ
ಘಟನೆಗಳು ಹೆಚ್ಚು ಬಾರಿ ಸಂಭವಿಸಿದಾಗ, ಈ ಸ್ಥಳವು ತಾನಾಗಿಯೇ
ಭಯಾನಕವಾಗಿ ಕಾಣಲಾರಂಭಿಸುತ್ತದೆ.
ಸರ್ಕಾರಿ ಮಹಿಳಾ
ಆಸ್ಪತ್ರೆ
- ಅಕೋಲಾ:
ಅಕೋಲಾದ ಸರ್ಕಾರಿ ಆಸ್ಪತ್ರೆ ಕೂಡ ಈ ತರಹದ ವಿಷಯಗಳಿಗೆ
ಹೆಸರುವಾಸಿಯಾಗಿದೆ. ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಂತೂ ಇಲ್ಲಿ ಚಿತ್ರ-ವಿಚಿತ್ರ ಘಟನೆಗಳನ್ನು ಹೆಚ್ಚಾಗಿ ಕಾಣಲಾಗಿದೆ.
ಇಲ್ಲಿಯ
ಒಂದು ವಾರ್ಡ್ನಲ್ಲಿ ಗರ್ಭಿಣಿ ಮಹಿಳೆ ಮೃತಪಟ್ಟಿದ್ದು, ಆಕೆಯ ಆತ್ಮ ಇಂದಿಗೂ ಗೋಚರಿಸುವುದನ್ನು ಹೇಳಲಾಗುತ್ತದೆ.ಇಂದಿಗೂ ನರ್ಸ್ ಗಳು ಆ ವಾರ್ಡ್ಗೆ
ಹೋಗಲು ಹೆದರುತ್ತಾರೆ.
ಸಂಜೆ ಮತ್ತು
ರಾತ್ರಿ ಯಾರೂ ಇಲ್ಲಿ ಒಂಟಿಯಾಗಿ ಸುತ್ತಾಡುವುದಿಲ್ಲ. ಈ ಸ್ಥಳವು ಅನೇಕ ಶಾಪಗ್ರಸ್ತ ಶಕ್ತಿಗಳ ಸಂಚಾರವನ್ನು
ಹೊಂದಿದೆಯೆಂದು ಹಲವು ಬಾರಿ ಇಲ್ಲಿಯ ಸ್ಥಳೀಯ ಜನರ ಅನುಭವಕ್ಕೆ ಬಂದಿದೆ.
ಹೀಗೆ ಇಲ್ಲಿ ಹಲವು ಘಟನೆಗಳು ಪ್ರಚಲಿತವಾಗಿವೆ. ವೈಯಕ್ತಿಕ ಅನುಭವ ವಿಭಿನ್ನವಾದ್ದರಿಂದ ಬೇರೆ ಬೇರೆ ತರಹದ ರಹಸ್ಯಾತ್ಮಕ ಕಥೆಗಳನ್ನು ಇಲ್ಲಿ ಕೇಳಬಹುದು. ಲೇಖಕನು ಉಲ್ಲೇಖಿಸಿದ ಈ ಘಟನೆಗಳು ನಿಜವಾಗಿಯೂ ಸಂಭವಿಸಿದವು ಎಂದು ಖಾತ್ರಿಯಾಗಿ ಹೇಳಲಾಗುವುದಿಲ್ಲ. ಈ ಸಂದರ್ಭಗಳಲ್ಲಿ ಯಾವುದೇ ಹೋಲಿಕೆಗಳು ಕಂಡುಬಂದರೆ, ಅದನ್ನು ಕೇವಲ ಕಾಕತಾಳೀಯವೆಂದು ಪರಿಗಣಿಸಬೇಕು.
-ಜಯ ಸಾಲ್ಯಾನ್ (ಮುಂಬೈ)

Comments
Post a Comment